ಕೊಪ್ಪಳದ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ ಯಶ್ ರಾಧಿಕಾ ದಂಪತಿ | Filmibeat Kannada

2017-11-28 627

Kannada Actor & Actress Yash, Radhika Pandit offered Pooja & Bagina to Tallur lake, Koppala. Watch video.

ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ ಯಶ್-ರಾಧಿಕಾ ದಂಪತಿ. ಹತ್ತು ತಿಂಗಳ ಹಿಂದಿನಿಂದ ಪಟ್ಟ ಪರಿಶ್ರಮಕ್ಕೆ ಫಲ ಸಿಕ್ಕಿರುವ ಸಾರ್ಥಕತೆಯಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಇಂದು (ನವೆಂಬರ್ 27) ಕೊಪ್ಪಳದ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ನಾಲ್ಕು ವರ್ಷಗಳಿಂದ 96 ಎಕರೆಯ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಸಂಪೂರ್ಣವಾಗಿ ಹೂಳಿನಿಂದ ತುಂಬಿದ್ದ ಈ ಕೆರೆಯ ಹೂಳನ್ನ ತೆಗೆಯುವ ಕಾರ್ಯಕ್ಕೆ ಯಶ್ ಮತ್ತು ರಾಧಿಕಾ ಚಾಲನೆ ನೀಡಿದ್ರು. ಯಶೋಮಾರ್ಗದ ವತಿಯಿಂದ 4 ಕೋಟಿ ವೆಚ್ಚದಲ್ಲಿ ತಲ್ಲೂರು ಕೆರೆಯ ಅಭಿವೃದ್ದಿಯ ಕೆಲಸ ಪ್ರಾರಂಭಿಸದ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ನೀರು ಕಾಣಿಸಿಕೊಂಡಿತ್ತು.ಅದೇ ಸಮಯಕ್ಕೆ ಚೆನ್ನಾಗಿ ಮಳೆ ಸುರಿದ ಪರಿಣಾಮ ಕೆರೆ ತುಂಬಿದೆ. ಸಾಕಷ್ಟು ನೀರು ಶೇಖರಣೆಯಾಗಿದ್ದು ಸದ್ಯ ಸುತ್ತಮುತ್ತಲಿದ ಹತ್ತು ಗ್ರಾಮಗಳಿಗೆ ತಲ್ಲೂರು ಕೆರೆಯ ನೀರು ಉಪಯೋಗವಾಗ್ತಿದೆ. ಇದರಿಂದ ಸಂತೋಷಗೊಂಡ ರೈತರು ಹಾಗೂ ಸ್ಥಳೀಯರು ಯಶ್ ಮತ್ತು ರಾಧಿಕಾ ಪಂಡಿತ್ ರನ್ನ ತಲ್ಲೂರಿಗೆ ಕರೆಸಿ ಅವರಿಂದಲೇ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.